Wednesday, August 3, 2011

ಮಳೆ

ಈ ಬಾರಿಯ ಮಳೆಗಾಲ ಇಳೆಯನ್ನು ಮತ್ತೆ ಹಸಿರಾಗಿಸಿದೆ,
ಮರಗಳ ಮೇಲಿದ್ದ ಧೂಳು ತೊಳೆದು ಸಮುದ್ರ ಸೇರಿದೆ,
ನವಿಲುಗಳು ಸಂತಸದಿಂದ ರೆಕ್ಕೆ ಬಿಚ್ಚಿ ಕುಣಿದಾಡುತ್ತಿವೆ,
ಬಸ್ಸು ಹಾರಿಸಿ ಹೋದ ಕೆಸರು ಬಸ್ ಸ್ಟಾಂಡಿನ ಗೋಡೆಗಳ ಮೇಲೆ ಹೊಸ ಚಿತ್ತಾರವನ್ನು ಬಿಡಿಸಿದೆ,
ಬಣ್ಣ ಬಣ್ಣದ ಕೊಡೆಗಳ ಕ್ಯಾಟ್ ವಾಕ್ ರಸ್ತೆಗಳ ಮೇಲೆ ಸರಿದಾಡುತ್ತಿದೆ,
ಮಳೆಯನ್ನು ನೋಡುತ್ತ ಜುರ್ರುವ ಚಹಾದ ಮಜ ಏಕೋ ಮತ್ತೇರಿಸುತ್ತಿದೆ,
ಮತ್ತೆ ಮಳೆ ಹುಯ್ಯುತಿದೆ ಎಲ್ಲ ನೆನಪಾಗುತಿದೆ,,,,,,,,,,,,,,,,,,,,,,,,,,,,,,,,,,,,,,,,

ನಿರುತ್ತರ

ನನ್ನ ಹೊಟ್ಟೆ ಹಸಿದಿದ್ದರೆ,
ಯಾವುದೇ ಕೆಲಸ ಮಾಡಲು ನನಗೆ ಸಂಕೋಚವಿಲ್ಲದಿದ್ದರೆ,ಹಾಗೂ
ನನ್ನಲ್ಲಿ ಛಲವೊಂದಿದ್ದರೆ,
ನಾನು ಎಂತಹುದೇ ಪರಿಸ್ಥಿತಿಯನ್ನು ನಿಭಾಯಿಸಬಲ್ಲೆ ,,, ಎಂತಹುದೇ ಪರಿಸ್ಥಿತಿಯನ್ನು.............



ವಿಠ್ಠಲ ವೆಂಕಟೇಶ ಕಾಮತ
(ಇಡ್ಳಿ,ಆರ್ಕಿಡ್ ಮತ್ತು ಆತ್ಮಬಲ)