Monday, July 5, 2010

ದೇವರ ಮರೆತರೂ ಧಾರಾವಾಹಿ ಮರೆಯದಿರಿ

ಯಮಲೋಕದಲ್ಲೋಂದು ದಿನ ಯಮನ ದರ್ಬಾರು ನಡೆಯುತ್ತಿತ್ತು

ಒಬ್ಬ ಅಜ್ಜಿಯ ವಿಚಾರಣೆ ನಡೆಸಿದ ಯಮ ಕೇಳಿದ ಏನಜ್ಜಿ ನಿನ್ನ ಪುಣ್ಯದ ಅಕೌಂಟು ತುಂಬಾ ಖಾಲಿಯಾಗಿದೆಯಲ್ಲಾ ಯಾಕೆ ಎಂದು ಕೇಳಿದ. ಹೂಂ ಎಂದರೂ ಇಲ್ಲ ಹಾಂ ಎಂದರೂ ಅಜ್ಜಿಯ ಮಾತಿಲ್ಲ,
ಕೊನೆಗೊಮ್ಮೆ ಅಜ್ಜಿ ಸಿಟ್ಟಿನಿಂದ ಯಮನಲ್ಲಿ ಕೇಳಿಯೇ ಬಿಟ್ಟಳು ನಿನಗೇನು ದಯೆ ದಾಕ್ಷಿಣ್ಯ ಎನೂ ಇಲ್ವೆ
ಸರಿಯಾಗಿ "ಮನೆಯೊಂದು ಮೋರು ಬಾಗಿಲು" ಬರುವ ಸಮಯಕ್ಕೇ ಬಂದರು ನಿನ್ನ ದೂತರು ಅಂತ.


ಅಯ್ಯೋ ಅಜ್ಜಿ ನೀನು ಧಾರಾವಾಹಿಯಲ್ಲಿ ಜಾಹಿರಾತು ಬಂದಾಗಲಾದರೂ
ದೇವರ ಧ್ಯಾನ ಮಾಡಿದ್ದರೆ ನಿನಗೇಕೆ ಈ ಯಮಲೋಕದ ದರ್ಶನ ಯೋಗ ಬರುತ್ತಿತ್ತು, ಅದೂ ಅಲ್ಲದೇ
ನನ್ನನ್ನೇ ದಬಾಯಿಸುತ್ತೀಯಾ , ಎನ್ನುತ್ತಾ ಈ ಅಜ್ಜಿಯನ್ನು ಕೇವಲ "ಟಿ ವಿ 9" ಬರುವ ಕೋಣೆಯಲ್ಲಿ ಒಂದು
ವರ್ಷ ಕೋಡಿ ಹಾಕಿ ಎಂದು ತೀರ್ಪು ನೀಡಿದ............................

ಬಿ ಜಿ ಎಲ್ ಸ್ವಾಮಿ


ಸ್ವಾಮಿಯವರು ಕನ್ನಡದ ಕೆಲವೇ ಕೆಲವು ಬಹುಮುಖ ಪ್ರತಿಭೆಯ ಲೇಖಕರಲ್ಲಿ ಒಬ್ಬರು.
ಕನ್ನಡದ ದಾರ್ಶನಿಕ ಕವಿ ಗುಂಡಪ್ಪನವರ ಮಗ, ಓದಿದ್ದು ಸಸ್ಯಶಾಸ್ತ್ರವಾದರೂ ಎಲ್ಲ ರೀತಿಯ
ಬರವಣಿಗೆಯಲ್ಲೂ ಕೂಡ ಸಿದ್ಧ ಹಸ್ತರು.


ತಮ್ಮ ಅಪಾರವಾದ ಹಾಸ್ಯದ ಶೈಲಿಯಲ್ಲಿ ಎಲ್ಲಾ ವಿಷಯಗಳನ್ನೂ ತಿಳಿಸುವ ವಿಧ ಬಲು ಸುಂದರ. ಸೂಕ್ಷ್ಮವಾದ ನವಿರು ಹಾಸ್ಯ ಶೈಲಿಯಲ್ಲಿಯೇ ಮನ ಮುಟ್ಟುವಂತೆ ವಿಷಯದ ಜ್ನಾನವನ್ನು ತಿಳಿಸುತ್ತಾರೆ


ತಮಿಳರ ಬಗ್ಗೆ ತಮಿಳುನಾಡಿನಲ್ಲಿ ಪ್ರಾಧ್ಯಾಪಕರಾಗಿದ್ದಾಗಿನ ವಿಷಯಗಳ ಮೆಲೆಯೇ ಬಹುತೇಕ ಪುಸ್ತಕಗಳನ್ನು ಬರೆದಿದ್ದಾರೆ ಎಂದರೂ ತಪ್ಪಾಗಲಾರದು.

ಅವುಗಳಲ್ಲಿ "ತಮಿಳು ತಲೆಗಳ ನಡುವೆ"ಒಂದು ಮಾಸ್ಟರ್ ಪೀಸ್.

ಸಸ್ಯ ಶಾಸ್ತ್ರದ ಬಗ್ಗೆ ಬರೆದರೂ ಎಲ್ಲರೂ ಓದಲೇ ಬೇಕಾದ ಪುಸ್ತಕ "ಹಸಿರುಹೊನ್ನು"
ತಮ್ಮ ಕಾಲೇಜು ದಿನಗಳ ಸಂದರ್ಭಗಳನ್ನು
"ಪ್ರಾಧ್ಯಾಪಕನ ಪೀಠದಲ್ಲಿ"
"ಕಾಲೇಜು ರಂಗ"
"ಕಾಲೇಜು ತರಂಗ"
ಮುಂತಾದ ಪುಸ್ತಕಗಳಲ್ಲಿ ವರ್ಣಿಸಿದ್ದಾರೆ.

ಭಾರತದಲ್ಲಿ ಉಪಯೋಗಿಸುವ ವಿದೇಶಿ ಮೂಲದ ತರಕಾರಿಗಳ ಬಗ್ಗೆ ಬರೆದಿರುವ ಪುಸ್ತಕ
"ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕಾ".

ಇವರು ಕನ್ನಡ ಕಂಡ ಅಪರೂಪದ ಲೇಖಕರು ಎಂಬಲ್ಲಿ ಎರಡು ಮಾತಿಲ್ಲ.....